ಕಾರ್ಲ್ ಡಿ.ಆಂಡರ್ಸನ್ (೩ ಸೆಪ್ಟೆಂಬರ್ ೧೯೦೫ – ೧೧ ಜನವರಿ ೧೯೯೧) ಅಮೆರಿಕದ ಭೌತವಿಜ್ಞಾನಿ.ಇವರು ಪಾಸಿಟ್ರಾನ್‌ನನ್ನು ಕಂಡು ಹಿಡಿದು ಪ್ರಸಿದ್ಧರಾದರು. ಇವರಿಗೆ ಇದೇ ವಿಷಯಕ್ಕೆ ೧೯೩೬ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. == ಬಾಲ್ಯ ಮತ್ತು ಶಿಕ್ಷಣ == ನ್ಯೂಯಾರ್ಕ್‍ನಲ್ಲಿ ಜನಿಸಿದ. ಕ್ಯಾಲಿಫೋರ್ನಿಯಾದ ಔದ್ಯೋಗಿಕರಣ ಸಂಸ್ಥೆಯಲ್ಲಿ (ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವಿದ್ಯಾಭ್ಯಾಸ ಮಾಡಿ 1930ರಲ್ಲಿ ಪದವೀಧರನಾದ. ಕೆಲವು ಕಾಲದ ಮೇಲೆ ಅದೇ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ. == ಸಂಶೋಧನೆ == ವಿಶ್ವಕಿರಣಗಳ (ಕಾಸ್ಮಿಕ್ ರೇಸ್) ಸಂಶೋಧನೆಯಲ್ಲಿ ನಿರತನಾದ ಇವನು 1932ರಲ್ಲಿ ಪಾಸಿಟ್ರಾನ್ ಎಂಬ ಸೂಕ್ಷ್ಮ ಧನ ವಿದ್ಯುತ್ಕಣವನ್ನು ಕಂಡುಹಿಡಿದ. ಇದು ಎಲೆಕ್ಟ್ರಾನ್ ಎಂಬ ಋಣ ವಿದ್ಯುತ್ಕಣದ ಪ್ರತಿಯೋಗಿ. ಡಿರಾಕ್ ಆ ಮೊದಲೇ ವಿವರಿಸಿದ ತತ್ತ್ವದ ಪ್ರಕಾರ ಇಂಥ ಕಣ ಇರಬೇಕಿತ್ತು. ಅದನ್ನು ಪ್ರಾಯೋಗಿಕವಾಗಿ ಸಾಧಿಸಿದ ಹಿರಿಮೆ ಅವನದು. ಈ ಶೋಧನೆಗಾಗಿ 1936ರ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಯನ್ನು ಈತನಿಗೂ ವಿಕ್ಟರ್‍ಹೆಸ್ ಎಂಬಾತನಿಗೂ ಹಂಚಲಾಯಿತು.. ಮೆಸಾನ್ ಕಣದ (ಎಲೆಕ್ಟ್ರಾನ್ ಮತ್ತು ಪ್ರೋಟಾನ್‍ಗಳ ಮಧ್ಯಸ್ಥವಾದ ಭಾರವನ್ನು ಹೊಂದಿದ) ಶೋಧನೆಯಲ್ಲಿಯೂ ಈತನ ಪಾತ್ರ ಮುಖ್ಯವಾದುದೇ. ನೆಡರ್ ಮೇಯರ್ ಎಂಬಾತ ಇವನ ಸಂಶೋಧನೆಗಳಲ್ಲಿ ಸಹಕಾರಿಯಾಗಿದ್ದ. == ಉಲ್ಲೇಖಗಳು == == ಬಾಹ್ಯಸಂಪರ್ಕ == 2017-05-04 ವೇಬ್ಯಾಕ್ ಮೆಷಿನ್ ನಲ್ಲಿ. , . 1, . 445–446. . 30 1966, , 22 2011 ವೇಬ್ಯಾಕ್ ಮೆಷಿನ್ ನಲ್ಲಿ. , (.). ", (1905-1991)". .